ಜೀವನಾಡಿ ಕಾವೇರಿ ತವರಲ್ಲಿ ಮೋಜು ಮಸ್ತಿಯ ರೇವ್ ಪಾರ್ಟಿ... - ಕೊಡಗು ರೇವ್ ಪಾರ್ಟಿ ಸುದ್ದಿ
ಅದು ಪಾವಿತ್ರ್ಯತೆಗೆ ಹೆಸರಾದ ಜಿಲ್ಲೆ. ಜೀವನಾಡಿ ಕಾವೇರಿ ತವರು, ವಿಶೇಷ ಸಂಸ್ಕೃತಿಯ ನೆಲೆಬೀಡು ಅದು.. ಇಂತಹ ಪುಣ್ಯ ನೆಲ ಇದೀಗ ಹಣದಾಸೆಗೆ ಅಪವಿತ್ರಗೊಳ್ಳುತ್ತಿದೆ. ಕೆಟ್ಟ ಸಂಸ್ಕೃತಿಯೊಂದು ಅಲ್ಲಿ ಚಿಗುರೊಡೆಯುತ್ತಿದೆ. ಅಲ್ಲಿ ತಲೆ ಎತ್ತಿರುವ ಅನಧಿಕೃತ ಹೋಮ್ಸ್ ಸ್ಟೇಗಳಲ್ಲಿ ನಡೆಯುವ ಪಾರ್ಟಿಗಳು ಜಿಲ್ಲೆಯ ಹೆಸರಿಗೆ ಕಳಂಕ ತಂದೊಡ್ಡುತ್ತಿವೆ. ಯಾವುದು ಆ ಜಿಲ್ಲೆ... ಅಲ್ಲಿ ಅದೆಂತ ಪಾರ್ಟಿ ನಡೀತಿದೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...