ಹಿಂದಿ ಸಪ್ತಾಹ ದಿನಾಚರಣೆ ಮಾಡಿದ್ರೆ ಉಗ್ರ ಹೋರಾಟ : ಕರವೇ - ಹಿಂದಿ ಹೇರಿಕೆ
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಮೇಗೌಡ, ಪ್ರತಿವರ್ಷ ಸೆಪ್ಟೆಂಬರ್ 14 ರಂದು ಹಿಂದಿ ಸಪ್ತಾಹ ದಿನಾಚರಣೆ ಮಾಡುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ರಾಜ್ಯದಲ್ಲಿ ಹಿಂದಿ ಭಾಷೆಯ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರಕ್ಕೆ ಒಳಪಡುವ ಇಲಾಖೆಗಳಲ್ಲಿ ಹಿಂದಿ ಸಪ್ತಾಹ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಹೀಗಾಗಿ ದಾವಣಗೆರೆಯಲ್ಲಿ ಹಿಂದಿ ಸಪ್ತಾಹ ಮಾಡಿದರೆ ಕರವೇ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಲಿದೆ ಎಂದು ಎಚ್ಚರಿಕೆ ನೀಡಿದರು.