ದೇವರ ಕೋಣೆಗೆ ನುಗ್ಗಿದ ನಾಗಪ್ಪನಿಗೆ ಆರತಿ ಬೆಳಗಿದ ಕುಟುಂಬಸ್ಥರು - ನಾಗರಹಾವು ರಕ್ಷಣೆ
ನೆಲಮಂಗಲದ ಸೋಂಪುರ ಹೋಬಳಿಯ ನಿಡವಂದ ಗ್ರಾಮದ ಮನೆಯೊಂದರಲ್ಲಿ ನಾಗರಹಾವು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಮನೆಯ ದೇವಕೋಣೆಯಲ್ಲಿ ಗಂಟೆಗಳ ಕಾಲ ಗಿರಕಿ ಹೊಡೆಯುತ್ತಿತ್ತು. ಬಳಿಕ ಕುಟುಂಬಸ್ಥರು ಉರಗತಜ್ಞ ಸ್ನೇಕ್ ರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ರಾಜು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ದೇವರ ಕೋಣೆಗೆ ನುಗ್ಗಿದ್ದ ನಾಗರಹಾವಿಗೆ ಕುಟುಂಬಸ್ಥರು ಆರತಿ ಬೆಳಗಿ ಭಕ್ತಿಯಿಂದ ಪೂಜೆಗೈದು ನಮಿಸಿದ್ದಾರೆ.