ಡಬ್ಬಕ್ಕೆ ಬಾಯಿ ಹಾಕಿದ ನಾಯಿಗೆ ಏಕಿಂಥ ಶಿಕ್ಷೆ? ಪಾಪ ಇದರ ಕಷ್ಟ ಯಾರಿಗೂ ಬೇಡ - ಪ್ಲಾಸ್ಟಿಕ್ ಡಬ್ಬದ ಕಂಟ ಹೊತ್ತು ತಿರುಗುತ್ತಿರುವ ಬೀದಿ ನಾಯಿ
ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಬೀದಿ ನಾಯಿಯೊಂದು ಆಹಾರಕ್ಕಾಗಿ ಪ್ಲಾಸ್ಟಿಕ್ ಡಬ್ಬದೊಳಗೆ ತಲೆ ಹಾಕಿದೆ. ಆದರೆ ತಲೆ ಹೊರ ತೆಗೆಯುವಾಗ ಡಬ್ಬದ ಕಂಟವು ನಾಯಿಯ ಕೊರಳಲ್ಲೇ ಸಿಕ್ಕಿಹಾಕಿಕೊಂಡಿದ್ದು, ಡಬ್ಬದ ಕಂಟವನ್ನು ತನ್ನ ಜೊತೆಯಲ್ಲೇ ಹೊತ್ತು ತಿರುಗಾಡುವಂತಾಗಿದೆ. ಅಲ್ಲದೆ ತಲೆಯನ್ನ ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗಿಸಲೂ ಆಗುತ್ತಿಲ್ಲ. ಬೀದಿ ನಾಯಿಯಾಗಿರುವುದರಿಂದ ಕಚ್ಚುವ ಭಯದಿಂದ ಯಾರು ಸಹ ಕೊರಳಲ್ಲಿ ಸಿಲುಕಿ ಕೊಂಡಿರುವ ಡಬ್ಬವನ್ನು ತೆಗೆಯುವ ಪ್ರಯತ್ನ ಮಾಡಿಲ್ಲ. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವುದರಿಂದ ಅಮಾಯಕ ಪ್ರಾಣಿಗಳು ಪರದಾಡುವಂತಾಗುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.