ಸಾಲ ಮಾಡಿ ಸಾಲು ಮರಗಳನ್ನು ಬೆಳೆಸುತ್ತಿರುವ ಪರಿಸರ ಪ್ರೇಮಿ! - ಸಾಲ, ಸಾಲು ಮರ, ಬೆಳೆ, ಪರಿಸರ ಪ್ರೇಮಿ,
ತಮ್ಮ ನೆಚ್ಚಿನ ಸ್ಟಾರ್ ನಟ, ನಟಿಯರ ಹುಟ್ಟುಹಬ್ಬ ಬಂತೆಂದ್ರೆ ಸಾಕು ಅಭಿಮಾನಿಗಳು ಕೇಕ್ ಕಟ್ ಮಾಡೋದು, ರಕ್ತದಾನ, ಆಸ್ಪತ್ರೆಗಳಿಗೆ ತೆರಳಿ ಹಣ್ಣು ಹಂಪಲು ಹಂಚೋದು, ಬಡವರಿಗೆ ಊಟ ಹಾಕಿಸೋದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ತಾರೆ. ಆದ್ರೆ ವರನಟ ಡಾ. ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಯೊಬ್ಬ ಸಾಲ ಮಾಡಿ ಸಾವಿರಾರು ಸಸಿಗಳನ್ನು ನಡೋ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.