ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಿ ವಿಶೇಷವಾಗಿ ಮಗಳ ಜನ್ಮದಿನ ಆಚರಿಸಿದ ದಂಪತಿ! - ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ
ಹುಬ್ಬಳ್ಳಿ: ಮಗಳ ಜನ್ಮದಿನ ಹಿನ್ನೆಲೆ ನಗರದ ದಂಪತಿಯು ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದ್ದಾರೆ. ಈ ಮೂಲಕ ಮಗಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಜಾಗೃತಿ ಮೂಡಿಸಿದ್ದಾರೆ. ಮಂಜುನಾಥ ಹೆಬಸೂರ ದಂಪತಿ ಹೆಲ್ಮೆಟ್ ವಿತರಿಸಿದವರು. ತಮ್ಮ ಮಗಳ ಮೊದಲ ವರ್ಷದ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸದೇ, ನಗರದ ಚನ್ನಮ್ಮ ವೃತ್ತದ ಬಳಿ, ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮೂಲಕ ಮಾದರಿಯಾಗಿದ್ದಾರೆ.