ವಿದ್ಯುತ್ ಶಾಕ್: ಕಂಬದಲ್ಲೇ ಹಾರಿಹೋಯ್ತು ಗುತ್ತಿಗೆ ಕಾರ್ಮಿಕನ ಪ್ರಾಣ! - shimoga news
ಶಿವಮೊಗ್ಗ: ವಿದ್ಯುತ್ ಕಂಬವೇರಿ ಕಾರ್ಯನಿರ್ವಹಿಸುತ್ತಿದ್ದಾಗ ಗುತ್ತಿಗೆ ಕಾರ್ಮಿಕನೋರ್ವ ಕರೆಂಟ್ ಶಾಕ್ನಿಂದ ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ. ಪಟ್ಟಣದ ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವಾಗ ಕಿರಣ್(27) ಎಂಬುವನ ಪ್ರಾಣಪಕ್ಷಿ ಹಾರಿಹೋಗಿದೆ. ಈತ ಸಾಗರ ತಾಲೂಕು ನಿಚಡಿ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗ್ತಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.