ಮೀನಿಗೆ ಈ ಮಹಿಳೆಯ ಕೈಯಿಂದಾದ ಮಸಾಲೆ ಬಲು ಫೇಮಸ್.. ಫ್ಲಿಪ್‌ಕಾರ್ಟ್, ಅಮೇಜಾನ್‌ನಲ್ಲೂ ಕರಾವಳಿ ಘಮಲು! - ಹಸಿ ಮೀನಿಗೆ ಮಸಾಲೆ ರುಚಿ ನೀಡಿದ ಕರಾವಳಿ ನಾರಿ
ಮಹಿಳೆ.. ಈ ಮೂರಕ್ಷರದಲ್ಲಿ ಅದ್ಯಾವ ಶಕ್ತಿಯಿದೆಯೋ ಆ ದೇವರೇ ಬಲ್ಲ. ಈಗ ಮಹಿಳೆ ಸಾಧನೆಯ ಗುರುತು ಮೂಡಿಸದ ಕ್ಷೇತ್ರವೇ ಇಲ್ಲ. ಮೀನುಗಾರಿಕೆಯ ಸಾಹಸ ಬದುಕಿನಲ್ಲೂ ಮಹಿಳೆಯರ ಹೆಜ್ಜೆ ಗುರುತಿದೆ. ಗಂಡು ಕಡಲಿಗಿಳಿದು ಮೀನು ಭೇಟೆಯಾಡಿದರೇನಂತೆ?. ಕಡಲು ಕೊಟ್ಟ ಮೀನಿಗೆ ಮಸಾಲೆ ಅರೆದು ಹೊಸ ರುಚಿ ನೀಡಿದ ಮಹಿಳೆಯೊಬ್ಬರು ಇದೀಗ ಸ್ವಾವಲಂಬಿ ಉದ್ಯಮಿಯಾಗಿದ್ದಾರೆ. ಹಸಿ ಮೀನಿಗೆ ಮಸಾಲೆಯ ರುಚಿಕೊಟ್ಟವರ ಸಾಹಸಗಾಥೆ ಹೇಳ್ತೀವಿ ನೋಡಿ..