ಕೊಯಿಲಿಗೆ ಬಂದ ರಾಗಿ... ಮನೆ ತುಂಬಿಸಿಕೊಳ್ಳಲು ರೈತರ ತವಕ - A cloud-covered atmosphere
ಕಳೆದೆರಡು ತಿಂಗಳಿಂದ ಮೋಡ ಮುಸುಕಿದ ವಾತಾವರಣಕ್ಕೆ ಬೆಚ್ಚಿರುವ ರೈತನ ಮೊಗದಲ್ಲೀಗ ಮಂದಹಾಸ ಮೂಡುತ್ತಿದೆ. ವಾಯುಭಾರ ಕುಸಿತ ಇವರನ್ನು ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿತ್ತು. ಮೋಡ ಕವಿದ ವಾತಾವರಣ ಸರಿದು ನೆತ್ತಿಯ ಮೇಲೆ ಸೂರ್ಯನ ಬೆಳಕು ಬೀಳುತ್ತಿದ್ದಂತೆ ರೈತ ಕುಡುಗೋಲಿಗೆ ಕೆಲಸ ಕೊಟ್ಟಿದ್ದಾನೆ.