'ಐ ಡು ನಾಟ್ ಸಪೋರ್ಟ್ ಟು ಬಂದ್' ಅಂತಾ ಬೋರ್ಡ್ ಹಾಕ್ಕೊಂಡು ವ್ಯಕ್ತಿಯಿಂದ ಬೈಕ್ ರ‍್ಯಾಲಿ! - i do not support to band board latest news
ಕಾರ್ಮಿಕ ಸಂಘಟನೆಗಳು ಇಂದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ರೆ, ಇಲ್ಲೊಬ್ಬ ''ಐ ಡು ನಾಟ್ ಸಪೋರ್ಟ್ ಟು ಬಂದ್'' ಎಂದು ಬೋರ್ಡ್ ಹಾಕಿಕೊಂಡು ಬೈಕ್ ರ‍್ಯಾಲಿ ಮಾಡುತ್ತಿದ್ದಾನೆ. ಧಾರವಾಡದ ಲೈನ್ ಬಜಾರ್ ನಿವಾಸಿ ಪ್ರಮೋದ ಕಾರಕೂನ ಎಂಬಾತ ಬೈಕ್ ಮೂಲಕ ತೆರಳಿ ಬಂದ್ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾನೆ. ಧಾರವಾಡದಿಂದ ಬೈಕ್ ಮೂಲಕ ತೆರಳುತ್ತಿರುವ ಆತ ಹುಬ್ಬಳ್ಳಿಗೆ ತೆರಳಿದ್ದು, ಅಲ್ಲಿ ಕೂಡಾ ಬಂದ್ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾನೆ ಎನ್ನಲಾಗಿದೆ.
Last Updated : Jan 8, 2020, 1:30 PM IST