ಕರ್ನಾಟಕ

karnataka

ETV Bharat / videos

ನೀರಿಲ್ಲದ ಬಾವಿಗೆ ಬಿದ್ದ ಕರಡಿ: ಜಾಂಬವಂತನನ್ನು ನೋಡಲು ಮುಗಿಬಿದ್ದ ಜನರು! - A bear fallen into a well in Ramanagara,

By

Published : Nov 2, 2019, 1:21 PM IST

ಆಹಾರ ಅರಸಿ ನಾಡಿಗೆ ಬಂದ ಕರಡಿಯೊಂದು ಪಾಳು ಬಾವಿಗೆ ಬಿದ್ದಿರುವ ಘಟನೆ‌ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.ತಾಲೂಕಿನ ಯರೇಹಳ್ಳಿ ಗ್ರಾಮದ ಹೊರಹೊಲಯದಲ್ಲಿನ ಅಂಗಡಿ ಸಿದ್ದಪ್ಪನ ಮಗ ಕುಮಾರ್ ಎಂಬುವವರಿಗೆ ಸೇರಿದ ಜಮೀನಿನಲ್ಲಿರುವ ಪಾಳು ಬಾವಿಗೆ ಕರಡಿ ಬಿದ್ದಿದೆ. ಆಹಾರ ಹುಡುಕುತ್ತಾ ಬಾವಿಗೆ ಬಿದ್ದಿರುವ ಕರಡಿಯನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಬಾವಿಯಲ್ಲಿ ಏಣಿ ಹಾಕಿ ಕರಡಿಯನ್ನ ರಕ್ಷಣೆ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದು, ಕರಡಿ‌ ಮೇಲೆತ್ತುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.ಈ ಭಾಗದಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿದ್ದು, ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ‌ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details