ಕಡಲಕೊರೆತ ತಪ್ಪಿಸಲು ಒಗ್ಗಟ್ಟಾದ ಕಡಲ ಮಕ್ಕಳು: ಚಿತ್ರಾಪುರದ ಜನತೆಗೆ ಎಲ್ಲೆಡೆ ಪ್ರಶಂಸೆ - ಸಮುದ್ರ ಕೊರೆತ
ಮಂಗಳೂರು: ಮಳೆಗಾಲ ಬಂದ ಸಂದರ್ಭದಲ್ಲಿ ಕಡಲು ಅಬ್ಬರಿಸುವುದು ಸಾಮಾನ್ಯ. ಹಲವೆಡೆ ಕಡಲ ಕೊರೆತಗಳು ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಕಡಲ ಕೊರತದಿಂದ ಊರನ್ನು ರಕ್ಷಿಸಲು ಮಂಗಳೂರಿನ ಚಿತ್ರಾಪುರದ ಗ್ರಾಮಸ್ಥರು ಒಟ್ಟಾಗಿ ಟೊಂಕ ಕಟ್ಟಿ ನಿಂತಿದ್ದು, ಇದರಿಂದ ಹಾನಿಯಾಗುವುದನ್ನು ತಪ್ಪಿಸಲು ಊರಿನ ಜನರೇ ಸೇರಿ ಕಡಲಿಗೊಂದು ಗೋಡೆ ಕಟ್ಟಿದ್ದಾರೆ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ.