ಮ್ಯಾಗಿ ಮಾಡಲು ಹೋದ ಬಾಲಕ ಅನಿಲ ದುರಂತಕ್ಕೆ ಬಲಿ..! - A 7year boy dead in tumkur
ತುಮಕೂರು: ಮ್ಯಾಗಿ ಮಾಡಲು ಗ್ಯಾಸ್ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿರುವ ಪರಿಣಾಮ ಬೆಂಕಿ ತಗುಲಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದಿದೆ. 7 ವರ್ಷದ ನೋಯಲ್ ಪ್ರಸಾದ್ ತಾನೇ ಮ್ಯಾಗಿ ಮಾಡಲು ಮುಂದಾಗಿದ್ದಾನೆ. ಅಡುಗೆ ಮನೆಗೆ ಹೋಗಿ ಗ್ಯಾಸ್ ಆನ್ ಮಾಡಿದ್ದಾನೆ. ಆದರೆ, ಲೈಟರ್ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಕಾರಣ ಹೆಚ್ಚು ಗ್ಯಾಸ್ ಸೋರಿಕೆಯಾಗಿದ್ದು, ಏಕಾಏಕಿ ಜೋರಾಗಿ ಬೆಂಕಿ ಹೊತ್ತಿಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
Last Updated : Oct 16, 2019, 1:26 PM IST