ದ.ಕ.ಜಿಲ್ಲೆಯಲ್ಲಿ 7 ದಿನದ ಕಂದಮ್ಮ, ಪೊಲೀಸ್ ಅಧಿಕಾರಿಯನ್ನೂ ಬಿಡದ ಕೊರೊನಾ - Dakshina Kannada
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾದ 84 ಪ್ರಕರಣಗಳಲ್ಲಿ 7 ದಿನದ ಕಂದಮ್ಮ, ಒಂದು ವರ್ಷದ ಮಗು ಹಾಗೂ ಓರ್ವ ಎಸಿಪಿ ಸೇರಿದ್ದಾರೆ. ನಿನ್ನೆ 84 ಪ್ರಕರಣ ದೃಢಪಟ್ಟಿದ್ದು, ಶಾರ್ಜಾದಿಂದ ಬಂದ 6 ಮಂದಿ, ಹೊರರಾಜ್ಯದಿಂದ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಆತಂಕಕ್ಕೆ ಕಾರಣವಾಗಿರುವುದು 28 ಐಎಲ್ಐ ಪ್ರಕರಣ. 38 ಪ್ರಾಥಮಿಕ ಸಂಪರ್ಕದಿಂದ ಹರಡಿದ ಸೋಂಕು ಮತ್ತು 11 ಮಂದಿಯ ಸಂಪರ್ಕವೇ ತಿಳಿದುಬಂದಿಲ್ಲ. ಜಿಲ್ಲೆಯಲ್ಲಿ ನಿನ್ನೆ 71 ವರ್ಷದ ವೃದ್ಧರೊಬ್ಬರು ಮಾತ್ರ ಗುಣಮುಖರಾಗಿದ್ದು, ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 833 ಪ್ರಕರಣಗಳು ದೃಢಪಟ್ಟಿದ್ದು ಇದರಲ್ಲಿ 444 ಮಂದಿ ಗುಣಮುಖರಾಗಿದ್ದಾರೆ. 17 ಮಂದಿ ಸಾವನ್ನಪ್ಪಿದ್ದು 372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.