ಸ್ವಯಂ ಪ್ರೇರಣೆಯಿಂದ 80 ಅಂಗಡಿ ಬಂದ್.. ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸಿದ ಮಾಲೀಕರು - Corona infection control
ವಿಜಯಪುರ : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಎಲ್‌ಬಿಎಸ್ ಮಾರುಕಟ್ಟೆಯ 80 ಅಂಗಡಿ-ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಅಂಗಡಿಗಳು ತೆರೆದಿದ್ರೆ ತಾನೇ ಜನ ವ್ಯಾಪಾರ, ವಹಿವಾಟು ಅಂತಾ ಮುಗಿಬೀಳ್ತಾರೆ. ಅದಕ್ಕೆ ಅಂಗಡಿಗಳೇ ಬಂದ್ ಆದರೆ ಪರಿಸ್ಥಿತಿ ಹತೋಟಿಗೆ ಬರಬಹುದು ಎಂಬುದು ಅಂಗಡಿ ಮಾಲೀಕರ ಅಭಿಪ್ರಾಯ.