ಇಳಿ ವಯಸ್ಸಿನಲ್ಲೂ ಬತ್ತದ ಎಣ್ಣೆಯುತ್ಸಾಹ; ಸರತಿ ಸಾಲಿನಲ್ಲಿ ನಿಂತ ಅಜ್ಜಿಯರಿಂದ ಮದ್ಯ ಖರೀದಿ - ಕೋಲಾರದಲ್ಲಿ ಮದ್ಯ ಮಾರಾಟ
ದೇಶಾದ್ಯಂತ ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದ ಹಲವೆಡೆ ಮಧ್ಯರಾತ್ರಿಯಿಂದಲೇ ಎಣ್ಣೆಪ್ರೀಯರು ಮದಿರೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಕೋಲಾರದಲ್ಲಿ 70 ವರ್ಷದ ಅಜ್ಜಿಯರಿಬ್ಬರು ಮದ್ಯ ಖರೀದಿಸುವ ತುಡಿತದಿಂದ ಬೆಳಗ್ಗೆ 5 ಗಂಟೆಯಿಂದಲೇ ಕಾಯ್ದು ಕುಳಿತಿದ್ದು ಕಂಡುಬಂತು. ತಮ್ಮ ಸರದಿ ಬಂದಾಗ ಅವರು ತಮ್ಮಿಷ್ಟದ ಎಣ್ಣೆ ಖರೀದಿಸಿದರು.