ಕರ್ನಾಟಕ

karnataka

ETV Bharat / videos

ಶಿವಮೊಗ್ಗ: ಸೋಂಕು ಪತ್ತೆಯಾದ 6 ಜನರಲ್ಲಿ ನಾಲ್ವರ ಸಂಪರ್ಕವೇ ಪತ್ತೆಯಾಗಿಲ್ಲ

By

Published : Jul 11, 2020, 9:26 AM IST

ಶಿವಮೊಗ್ಗದಲ್ಲಿ ನಿನ್ನೆ 5 ವರ್ಷದ ಬಾಲಕ ಸೇರಿದಂತೆ 6 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಬಾಲಕ ಸೇರಿ ನಾಲ್ವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ ಅವರಿಗೆ ಸೋಂಕು ತಗಲಿದೆ. ಇನ್ನು ಇಬ್ಬರಲ್ಲಿ ಒಬ್ಬರು‌ SARI ಹಾಗೂ ಇನ್ನೊಬ್ಬರು ILI ರೋಗ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿ ದಿನ 20ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದವು. ‌ಆದರೆ, ನಿನ್ನೆ ಕೇವಲ‌ 6 ಪ್ರಕರಣಗಳು ದಾಖಲಾಗಿ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇದುವರೆಗೆ 278 ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ 28 ಜನ ಸೇರಿದಂತೆ ಈವರೆಗೆ 169 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 69 ಕಂಟೇನ್ಮೆಂಟ್ ಝೋನ್​ಗಳಿದ್ದು, ಇದರಲ್ಲಿ 40 ಕ್ಕೂ ‌ಅಧಿಕ ಶಿವಮೊಗ್ಗ ನಗರದಲ್ಲಿಯೇ ಇವೆ.

ABOUT THE AUTHOR

...view details