ಸಿಂದಗಿ ಮಠದಲ್ಲಿ ಶಾಂತವೀರ ಪಟ್ಟಾಧ್ಯಕ್ಷರ 41ನೇ ಪುಣ್ಯಸ್ಮರಣೋತ್ಸವ - Pattadakal at Sindagi Math
ಹಾವೇರಿ: ಸಿಂದಗಿ ಮಠದಲ್ಲಿ ಶಾಂತವೀರ ಪಟ್ಟಾಧ್ಯಕ್ಷರ 41ನೇ ಪುಣ್ಯಸ್ಮರಣೋತ್ಸವ ನಡೆಯುತ್ತಿದೆ. ಇದರ ನಿಮಿತ್ತ ಸತತ ಏಳು ದಿನಗಳಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೊನೆಯ ದಿನವಾದ ಇಂದು ಶ್ರೀಗಳ ಹಿಂದಿನ ವಿದ್ಯಾರ್ಥಿಗಳು 60 ಕೆ.ಜಿ ಬೆಳ್ಳಿಯ ವಿವಿಧ ವಸ್ತುಗಳನ್ನು ಮಠಕ್ಕೆ ನೀಡುತ್ತಿದ್ದಾರೆ. ಅಲ್ಲದೇ ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಶ್ರೀಗಳ ಗದ್ದುಗೆಯನ್ನು ಪುಷ್ಪಗಳಿಂದ ಅಲಂಕರಿಸಿದ್ದಾರೆ. ಇದರಿಂದ ಪುಷ್ಪಗಳ ಲೋಕವೇ ಧರೆಗಿಳಿದಂತಿದೆ.