ಗದಗನಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ - ಗದಗನಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಗದಗ: 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಗದಗನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ "ಅತೀ ವೇಗದ ಸವಾರಿ ಸ್ವರ್ಗಕ್ಕೆ ದಾರಿ" ಎಂಬ ಘೋಷಣೆ ನೆರದವರಲ್ಲಿ ನಗೆ ಚಟಾಕಿ ಮೂಡಿಸಿತು. ಅತೀ ವೇಗದ ಸವಾರಿ ನರಕಕ್ಕೆ ದಾರಿ ಬದಲು, ಸ್ವರ್ಗಕ್ಕೆ ದಾರಿ ಎಂದು ಕೂಗಿದರು. ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್.ಪಿ. ಶ್ರೀನಾಥ್ ಜೋಶಿ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ತೋಂಟದಾರ್ಯ ಮಠದಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೈಕ್ ರ್ಯಾಲಿ ಮೂಲಕ ಜನಜಾಗೃತಿ ಮೂಡಿಸಲಾಯಿತು. ಹೆಲ್ಮೆಟ್ ಧರಸಿ ಜೀವ ರಕ್ಷಿಸಿ, ಕುಡಿದು ವಾಹನ ಓಡಿಸಿ ಯಮನ ಕೈಗೆ ಸಿಕ್ಕು ಹಾಕಿಕೊಳ್ಳಬೇಡಿ ಎಂಬ ಅನೇಕ ಘೋಷಣೆ ಕೂಗಿದರು. ಈ ಜನಜಾಗೃತಿ ಕಾರ್ಯಕ್ರಮದಲ್ಲಿ ಅನೇಕ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.