ಚಾಮರಾಜನಗರದಲ್ಲಿ 24 ಕೋವಿಡ್ ಸೋಂಕಿತರ ಸಾವು; ಅಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು? - ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವು
ಚಾಮರಾಜನಗರ: ಕೋವಿಡ್ ಎರಡನೇ ಅಲೆ ಬಳಿಕ ದೇಶದ ವಿವಿಧೆಡೆ ಆಕ್ಸಿಜನ್ ಕೊರತೆಯಿಂದ ನೂರಾರು ರೋಗಿಗಳು ಮೃತಪಟ್ಟಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಇದೀಗ ನಮ್ಮದೇ ರಾಜ್ಯದಲ್ಲಿ ಭೀಕರ ದುರಂತ ಘಟಿಸಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ (ಕೋವಿಡ್ ರೋಗಿಗಳಿಗೆ ಮೀಸಲಾಗಿದ್ದ ಆಸ್ಪತ್ರೆ)ಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 24 ಕೋವಿಡ್ ಸೋಂಕಿತರ ಪ್ರಾಣಪಕ್ಷಿ ಹಾರಿಹೋಗಿದೆ. ಈ ಪೈಕಿ 12 ಮಂದಿ ಆಕ್ಸಿಜನ್ ಕೊರತೆಯಿಂದ ಸಾವೀಗೀಡಾಗಿದ್ದು ಅತ್ಯಂತ ಗಂಭೀರ ಪ್ರಕರಣ. ಆಸ್ಪತ್ರೆ ಆವರಣದಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ರೋಧನೆ ಮನಕಲಕುವಂತಿತ್ತು. ಈ ಕುರಿತ ವಿಡಿಯೋ ಸ್ಟೋರಿ ಇಲ್ಲಿದೆ ನೋಡಿ..