ಸಿವಿಲ್ ಪೊಲೀಸ್ ಪೇದೆಗಳ 20ನೇ ವರ್ಷದ ಸೇವಾ ವಾರ್ಷಿಕೋತ್ಸವ.. - 1999ರಲ್ಲಿ ನೇಮಕಾತಿ ಹೊಂದಿದ ಸಿವಿಲ್ ಪೊಲೀಸ್ ಪೇದೆಗಳ ಸೇವಾ ವಾರ್ಷಿಕೋತ್ಸವ
ಕೊಪ್ಪಳ: ಜಿಲ್ಲೆಯಲ್ಲಿ 1999ರಲ್ಲಿ ನೇಮಕಾತಿ ಹೊಂದಿದ ಸಿವಿಲ್ ಪೊಲೀಸ್ ಪೇದೆಗಳ 20ನೇ ವರ್ಷದ ಸೇವಾ ವಾರ್ಷಿಕೋತ್ಸವ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಡಾ. ಕೆ. ರಾಮಚಂದ್ರರಾವ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ಖಾಸಗಿ ರೆಸಾರ್ಟ್ನಲ್ಲಿ ಕಾರ್ಯಕ್ರಮ ನಡೆಯಿತು. 1999ರಲ್ಲಿ ನೇಮಕಗೊಂಡ ಕೊಪ್ಪಳದ ಒಟ್ಟು 83 ಸಿವಿಲ್ ಪೊಲೀಸ್ ಪೇದೆಗಳಿಂದ ಈ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಬಿಳಿ ಜುಬ್ಬಾ ಪೈಜಾಮ್ ಧರಿಸಿದ 83 ಸಿವಿಲ್ ಪೊಲೀಸ್ ಪೇದೆಗಳು ಪುಷ್ಪವೃಷ್ಟಿ ಮಾಡುತ್ತಾ ಡಾ. ಕೆ. ರಾಮಚಂದ್ರರಾವ್ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಿದರು. ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್, ಎಸಿಬಿ ಡಿವೈಎಸ್ಪಿ ಆರ್ ಎಸ್ ಉಜ್ಜಿನಕೊಪ್ಪ ಸೇರಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Last Updated : Oct 15, 2019, 5:12 PM IST