ಹಾಸನ್: ಬುಕ್ ಆಫ್ ರೆಕಾರ್ಡ್ಸ್‌ಗೆ ಆಯ್ಕೆಯಾದ 200 ಮಿಲಿ ಚಿನ್ನದ ವಿಶ್ವಕಪ್ - ಹಾಸನ ಚಿನ್ನಬೆಳ್ಳಿ ಕುಶಲಕರ್ಮಿಯ ಸಾಧನೆ
ಹಾಸನ: ನಗರದ ಚಿನ್ನಬೆಳ್ಳಿ ಕುಶಲಕರ್ಮಿಯೊಬ್ಬರು ವಿನೂತನ ಪ್ರಯೋಗಗಳ ಮೂಲಕ ಕೈಯಿಂದ ಅರಳಿದ 200 ಮಿಲಿ ಚಿನ್ನದ ವಿಶ್ವಕಪ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2020ಕ್ಕೆ ಆಯ್ಕೆಯಾಗಿದೆ ಎಂದು ಈಟಿವಿ ಭಾರತ ಸಂದರ್ಶನದಲ್ಲಿ ಕ್ರಿಕೆಟ್ ಪ್ರೇಮಿಯಾಗಿರುವ ಎಚ್.ಎಲ್. ನರೇಂದ್ರ ತಿಳಿಸಿದ್ದಾರೆ. ಕಾಳಿಕಾಂಬ ದೇಗುಲ ಬೀದಿಯ ನರೇಂದ್ರ ಕಳೆದ 10 ವರ್ಷಗಳಿಂದ ನಿರಂತರವಾಗಿ ತಮ್ಮ ಕರ್ತವ್ಯದ ನಡುವೆ ಕ್ರಿಯಾತ್ಮಕ ಚಟುವಟಕೆಯಲ್ಲಿ ತಲ್ಲೀನರಾಗಿ ಶಿವಲಿಂಗ, ಕೊರೊನಾ ರಥ, ಡಾಕ್ಟರ್ಸ್ ಉಪಕರಣ ಹಾಗೂ ಅನ್ನದಾತ ರೈತನ ಸ್ಮರಣೆಗಾಗಿ ಮೂರು ಗ್ರಾಂ ತೂಕದ ನೇಗಿಲನ್ನು ಬೆಳ್ಳಿಯಲ್ಲೇ ತಯಾರಿಸಿ ತಮ್ಮ ಕೈಚಳಕ ತೋರಿದ್ದಾರೆ. ಏಳು ಹೆಡೆಯ ಬೆಳ್ಳಿಯ ನಾಗರಾಜ ಆಕರ್ಷಕವಾಗಿದ್ದು, ಇದು ಎಡ ಮತ್ತು ಬಲಕ್ಕೆ ತಿರುಗಿಸಿದಾಗ ಐದು ಹೆಡೆಯು ತೆರೆಯುತ್ತದೆ ಹಾಗೂ ಮುಚ್ಚಿಕೊಳ್ಳುತ್ತದೆ. ಇದು ಉಂಗುರದ ಮಾದರಿಯ ಸ್ಪರ್ಶ ನೀಡಿರುವುದು ಅದ್ಭುತ ಕಲ್ಪನೆಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.