ಕರ್ನಾಟಕ

karnataka

ETV Bharat / videos

ವಿಜಯಪುರ: ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಪತ್ತೆ - 2 ಚಿರತೆ ಮರಿಗಳು ಪತ್ತೆ

By

Published : Nov 26, 2020, 9:07 AM IST

Updated : Nov 26, 2020, 10:31 AM IST

ವಿಜಯಪುರ: ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಬಳಿ ಪ್ರಶಾಂತ ದೇಸಾಯಿ ಎಂಬುವರ‌ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ‌ಕಳೆದ ಕೆಲವು ತಿಂಗಳುಗಳ ಹಿಂದೆ ಇಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಮೇ ತಿಂಗಳಲ್ಲಿ ಇದೇ ಭಾಗದಲ್ಲಿ ಗಂಡು ಚಿರತೆ ಸೆರೆಯಾಗಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಬಿದ್ದಿತ್ತು. ಸದ್ಯ ಮರಿ ಚಿರತೆಗಳು ಸಿಕ್ಕಿದ್ದು, ತಾಯಿ ಚಿರತೆ ಪತ್ತೆಯಾಗಿಲ್ಲ. ಎರಡೂ ಚಿರತೆ ಮರಿಗಳನ್ನು ರಕ್ಷಿಸಿದ ಪ್ರಶಾಂತ ದೇಸಾಯಿ, ಮರಿಗಳನ್ನು ತೆಗೆದುಕೊಂಡು ಹೋಗಿ ಎಂದು‌ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಮರಿಗಳನ್ನು ಅರಣ್ಯ ಇಲಾಖೆಯ ವಾಚರ್ ಪ್ರಕಾಶ್​ ಹಾಗೂ ಇತರೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ತಾಯಿ ಚಿರತೆಗ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
Last Updated : Nov 26, 2020, 10:31 AM IST

ABOUT THE AUTHOR

...view details