ಧಾರವಾಡ್ದಾಗ್ 2 ಸಾಲ್ ಅದಾವ್ರೀಪಾ.. ಒಂದ್ 'ಗುಂಡು'ಮಕ್ಕಳದು, ಇನ್ನೊಂದ್ 'ಬೇಯ್ಸಿ' ಹಾಕೋರ್ದ್.. - Dharwad
ಧಾರಾನಗರಿಯೊಳಗೆ ಒಂದೆಡೆ ಎಣ್ಣೆ ಅಂಗಡಿ, ಇನ್ನೊಂದೆಡೆ ರೇಷನ್ ಅಂಗಡಿಗೆ ಅಕ್ಕಪಕ್ಕವೇ ಇರೋದ್ರಿಂದ ಅಪರೂಪದ ದೃಶ್ಯ ಕಂಡು ಬಂದಿದೆ. ತೇಜಸ್ವಿ ನಗರದ ಖಾಸಗಿ ವೈನ್ ಶಾಪ್ ಪಕ್ಕವೇ ನ್ಯಾಯ ಬೆಲೆ ಅಂಗಡಿಯೂ ಇದೆ. ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ಇದ್ರೆ, ರೇಶನ್ ಅಂಗಡಿ ಮುಂದೆ ಮಹಿಳೆಯರ ಸಾಲಿದೆ. ಕುಟುಂಬದ ಸದಸ್ಯ ಹೊಟ್ಟೆ ತುಂಬಿಸುವ ಹೊಣೆ ಹೊತ್ತ ತಾಯಿಯಂದಿರು ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಗಂಡ ಅಲ್ಲಲ್ಲ, ದಂಡ ಹೂಂ, 'ಗುಂಡು'ಮಕ್ಕಳೆಲ್ಲ ಎಣ್ಣೆಗಾಗಿ ಕ್ಯೂ ನಿಂತಿದ್ದಾರೆ. ಇಷ್ಟೇ ವ್ಯತ್ಯಾಸ..