ಸಿಡಿಲಿಗೆ 17 ಮೇಕೆ ಬಲಿ, ಮುಗಿಲು ಮುಟ್ಟಿದ ಮಾಲೀಕರ ಆಕ್ರಂದನ - 17 ಮೇಕೆಗಳು ಬಲಿ
ಕಾರವಾರ : ಸಿಡಿಲು ಬಡಿದು 17 ಮೇಕೆಗಳು ಸಾವನ್ನಪ್ಪಿರುವ ಘಟನೆ ಮುಂಡಗೋಡ ತಾಲೂಕಿನ ಸಿಗ್ನಳ್ಳಿಯಲ್ಲಿ ಇಂದು ನಡೆದಿದೆ. ಸಿಗ್ನಳ್ಳಿಯ ಮಾನು ನಾಗು ಶಳಕೆ ಮೇಕೆಗಳನ್ನು ಮೇಯಿಸಲು ತಮ್ಮ ಹೊಲದಲ್ಲಿ ಬಿಟ್ಟಿದ್ದರು. ಈ ವೇಳೆ ಏಕಾಏಕಿ ಗುಡುಗು ಸಹಿತ ಅಕಾಲಿಕ ಮಳೆ ಆರಂಭಗೊಂಡಿದೆ. ಮೇಕೆಗಳು ಅಲ್ಲೆ ಮರದಡಿ ನಿಂತಿದ್ದವು. ಆದರೆ, ಇದೇ ವೇಳೆ ಮರಕ್ಕೆ ಸಿಡಿಲು ಬಡಿದಿದೆ. ಒಂದೆರೆಡು ಹೊರತು ಪಡಿಸಿ ಸ್ಥಳದಲ್ಲಿಯೇ 17 ಮೇಕೆಗಳು ಸಾವನ್ನಪ್ಪಿವೆ. ಘಟನೆಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಮೇಕೆಗಳನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ಈ ಬಗ್ಗೆ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಬಂದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.