ಚಿಕ್ಕಮಗಳೂರಿನಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ - 15 foot long king cobra found in Chikmagalur
15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ತಿಮ್ಮಪ್ಪ ಎಂಬುವರ ತೋಟ ಹಾಗೂ ಮನೆಯ ಸುತ್ತ ಮುತ್ತ ಕಳೆದ ನಾಲ್ಕು ದಿನಗಳಿಂದ ಓಡಾಡುತ್ತಿದ್ದ, ಈ ಸರ್ಪವನ್ನು ಇಂದು ಕುದುರೆಗುಂಡಿ ಉರಗ ತಜ್ಞ ಹರೀಂದ್ರ ಅವರು ಸೆರೆ ಹಿಡಿದಿದ್ದಾರೆ.