ಕರ್ನಾಟಕ

karnataka

ETV Bharat / videos

ಕೊರೊನಾ ಲಾಕ್​ಡೌನ್​: ಯುಗಾದಿಗೆ ಬಟ್ಟೆ ಖರೀದಿಸುತ್ತಿದ್ದವರಿಗೆ ಪೊಲೀಸರಿಂದ ಲಾಠಿ ಏಟು ​​​ - ಕೊರೊನಾ ಸೋಂಕು

By

Published : Mar 24, 2020, 4:36 PM IST

ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಸೋಂಕಿನ ತಡೆಗೆ ರಾಜ್ಯ ಸರ್ಕಾರ ಹರಾಸಾಹಸ ಮಾಡುತ್ತಿದ್ದರೆ ಇತ್ತ ಚಳ್ಳಕೆರೆಯಲ್ಲಿ ಮಾತ್ರ ಯುಗಾದಿ ಹಬ್ಬಕ್ಕಾಗಿ ಜನರ ಬಟ್ಟೆ ಖರೀದಿ ಜೋರಾಗಿತ್ತು. ಚಳ್ಳಕೆರೆ ನಗರದ ಅಂಚೆ ಕಚೇರಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದರು. ರಾಜ್ಯಾದ್ಯಂತ ಲಾಕ್​ಡೌನ್​ ಆದೇಶ ಜಾರಿಯಲ್ಲಿದ್ರೂ ಕೂಡಾ ನಿರ್ಭಯವಾಗಿ ವ್ಯಾಪಾರ ಸಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಲಾಠಿ ರುಚಿ ತೋರಿಸಿ ಅವರನ್ನೆಲ್ಲ ಮನೆಗಟ್ಟಿದ್ದಾರೆ. ಅಲ್ಲದೆ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details