ಕೊಡಗು: ಮನೆ ಹತ್ತಿರ ಅಡಗಿ ಕೂತಿತ್ತು 12 ಅಡಿ ಉದ್ದದ ಕಾಳಿಂಗ ಸರ್ಪ! - ಭಾಗಮಂಡಲ ಸುದ್ದಿ
ಕೊಡಗು: ಮನೆಯೊಂದರಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿರುವ ಘಟನೆ ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಬಳಿ ನಡೆದಿದೆ. ಸಣ್ಣಪುಲಿಕೊಟ್ಟು ಗ್ರಾಮದ ಕುಯ್ಯಮುಡಿ ಕಡೋಡಿ ದೇವಸ್ಥಾನ ಸಮೀಪದ ಗಣೇಶ್ ಎಂಬುವರ ಮನೆ ಹತ್ತಿರ ಕಳೆದ ಒಂದು ವಾರದಿಂದ ಕಾಳಿಂಗ ಸರ್ಪ ಅಡಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞ ಸ್ನೇಕ್ ಪ್ರಜ್ವಲ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.