ಬದುಕು ನುಂಗಿದ ಸಂಕ್ರಮಣ ಪ್ರಯಾಣ: ಬಾಲ್ಯ ಸ್ನೇಹಿತೆಯರ ಬದುಕು ಕಸಿದುಕೊಂಡ ಗೋವಾ ತೀರ ಯಾನ! - ಭೀಕರ ಅಪಘಾತದಲ್ಲಿ 11 ಜನ ಸಾವು
ಧಾರವಾಡ: ಸಂಕ್ರಾಂತಿ ಹಬ್ಬಕ್ಕೆ ಗೋವಾಕ್ಕೆ ತೆರಳಲು ಮಿನಿ ಬಸ್ನಲ್ಲಿ ಹೊರಟಿದ್ದ ಗೆಳತಿಯರಿಗೆ, ವಿಧಿಯು ಜವರಾಯನ ರೂಪದಲ್ಲಿ ಕಾಡಿದೆ. ಟಿಪ್ಪರ್ ಡಿಕ್ಕಿ ಹೊಡೆದು, ವಿಧಿಯಾಟಕ್ಕೆ 16 ಗೆಳತಿಯರಲ್ಲಿ 11 ಮಂದಿಯ ಉಸಿರು ನಿಂತಿದೆ. ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದ ಬಾಲ್ಯದ ಗೆಳತಿಯರಿಗೆ, ಘೋರ ವಿಧಿ ಬಲಿ ಪಡೆದಿದೆ.