ಕಪ್ಪತ್ತಗುಡ್ಡದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 11 ಜನರ ಬಂಧನ - gadaga latest news
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ವ್ಯಾಪ್ತಿಯ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಬಲೆ ಹಾಕಿ ಪ್ರಾಣಿಗಳ ಬೇಟೆಯಾಡುತ್ತಿದ್ದ ಸುಮಾರು 11 ಜನರನ್ನು ಬಂಧಿಸಲಾಗಿದೆ. ಹೌದು, ಡೋಣಿ ಗ್ರಾಮದವರೇ ಆದ 11 ಜನ ಮೊಲ, ಕಾಡುಹಂದಿ, ಹಾಗೂ ಇನ್ನಿತರೆ ಪ್ರಾಣಿಗಳ ಬೇಟಿಯಾಡುತ್ತಿದ್ದರು. . ಆರ್‌ಎಫ್‌ಓ ಎಸ್.ಎಂ.ಶಿವರಾತ್ರೇಶ್ವರಸ್ವಾಮಿ ನೇತೃತ್ವದ ತಂಡದ ಕಾರ್ಯಾಚರಣೆಯಿಂದ 11 ಜನರನ್ನು ಬಂಧಿಸಲಾಗಿದೆ. ಇನ್ನು ಬಂಧಿತರಿಂದ 11 ಬೇಟೆ ಬಲೆ, 8 ಬೈಕ್ಗಳನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಬಂಧಿತ ಆ 11 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.