ಗಾಂಧಿ ವೇಷ ದಾರಿಯಿಂದ ಮೋದಿ ಗುಣಗಾನ - ಗಾಂಧಿ ವೇಷ ದಾರಿಯಿಂದ ಮೋದಿ ಗುಣಗಾನ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಾಂಧಿ ವೇಷದಾರಿ ಅಗಸ್ಟೀಯನ್ ಡಿ ಅಲ್ಮೇಡಾ ಇಂದು ಕೂಡ ಜಿಕೆವಿಕೆ ಆವರಣದಲ್ಲಿ ಆರಂಭವಾದ 107 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಪಾಲ್ಗೊಳ್ಳಲು ಆಗಮಿಸಿದ್ದರು. ಮಹಾತ್ಮ ಗಾಂಧಿ ಅವರನ್ನು ಸಂಪೂರ್ಣವಾಗಿ ಹೋಲುವ 75 ವರ್ಷ ಪ್ರಾಯದ ಆಗಸ್ಟಿಯನ್ ಮೋದಿ ಅಭಿಮಾನಿಯಾಗಿದ್ದು, ಗೋವಾದಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದು ದೇಶಾದ್ಯಂತ ಸಂಚರಿಸುತ್ತಾ ಸಾಧ್ಯವಾದಷ್ಟು ಮೋದಿ ಹೋದ ಕಡೆಯಲ್ಲ ಭೇಟಿ ಕೊಡುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇಂದಿನ ಭೇಟಿ ಸಂದರ್ಭ ಈಟಿವಿ ಭಾರತ ಪ್ರತಿನಿಧಿ ಜೊತೆ ಅವರು ಹಂಚಿಕೊಂಡ ಅನುಭವ ಇಲ್ಲಿದೆ.