ಬಾಗಲಕೋಟೆ: ವಾಸವಿ ದೀಕ್ಷೆ ಪಡೆದ 102 ದಂಪತಿಗಳು - ವಾಸವಿ ದೀಕ್ಷೆ ಪಡೆದ 102 ದಂಪತಿಗಳು
ಬಾಗಲಕೋಟೆ ನಗರದ ಚರಂತಿಮಠ ಸಭಾಂಗಣದಲ್ಲಿ 18 ನೇ ವರ್ಷದ ವಾಸವಿ ದೀಕ್ಷೆ ನಿಮಿತ್ತ ಶ್ರೀ ವಾಸವಿ ದೀಕ್ಷಾರ್ಥಿಗಳ ಸಮಾವೇಶ ಜರುಗಿತು. ಐದು ದಿನಗಳ ಕಾಲ ನಡೆಯುವ ಈ ದೀಕ್ಷಾರ್ಥಿಗಳ ಸಮಾರಂಭದಲ್ಲಿ, ಗದಗ, ಹುಬ್ಬಳ್ಳಿ, ಧಾರವಾಡ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ ಮಹಿಳೆಯರು ಹಾಗೂ ಪುರುಷರು ದೀಕ್ಷೆ ಪಡೆದರು. ತಮ್ಮ ಲೌಕಿಕ ಜೀವನ ಬಿಟ್ಟು, ಸಾಮಾನ್ಯರಂತೆ ಜೀವನ ಸಾಗಿಸುವುದಕ್ಕಾಗಿ, ಶ್ರೀ ವಾಸವಿ ದೇವಿಗೆ ಪೂಜೆ, ಭಜನೆ, ಜಪ ಹಾಗೂ ಮಹಾ ಮಂಗಳಾರತಿ ಹಾಗೂ ಅಗ್ನಿ ಪ್ರವೇಶದ ಮೂಲಕ 102 ದಂಪತಿಗಳು ದೀಕ್ಷೆ ಪಡೆದರು. ಅಗ್ನಿ ಪ್ರವೇಶ ಮಾಡಿಸಿದ 102 ಋಷಿಗಳ ಸ್ಮರಿಸಿ ದೀಪ ಬೆಳಗಿಸಿದರು. ಈ ವೇಳೆ ವಿಶೇಷ ರೀತಿಯ ಪೂಜೆ, ಪುನಸ್ಕಾರ ಜರುಗಿದವು.