ಮನೆ ಹಿಂದೆ ಮೊಕ್ಕಾಂ ಹೂಡಿದ್ದ ಕಾಳಿಂಗ ಸರ್ಪ ರಕ್ಷಣೆ - 10-foot-king-cobra-rescued
ಚಿಕ್ಕಮಗಳೂರು: ಮನೆ ಹಿಂಬದಿಯಲ್ಲಿ ಪದೆ ಪದೇ ಸಂಚರಿಸುತ್ತಿದ್ದ, ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಜಿಲ್ಲೆಯ ಶೃಂಗೇರಿ ನಗರದಲ್ಲಿ ರಕ್ಷಣೆ ಮಾಡಲಾಗಿದೆ. ಮನೆಯ ಸದಸ್ಯರು ಕಾಳಿಂಗ ಸರ್ಪದ ಸಂಚಾರ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಶೃಂಗೇರಿಯ ಉರಗ ಪ್ರೇಮಿ ಸ್ನೇಕ್ ಅರ್ಜುನ್ಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರ್ಜುನ್ 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ಮಾಡಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 10 ಅಡಿ ಉದ್ದವಿದ್ದ ಕಾಳಿಂಗನನ್ನು ಸುರಕ್ಷಿತವಾಗಿ ಶೃಂಗೇರಿ ಹೊರ ವಲಯದ ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟಿದ್ದಾರೆ.