ಸರ್ಕಾರ ಮೃತ ನವೀನ್ ಪಾರ್ಥಿವ ಶರೀರವನ್ನು ಬೇಗ ತರುವ ಕೆಲಸ ಮಾಡಬೇಕು: ಎಸ್ ಆರ್ ಪಾಟೀಲ್ - ಮೃತ ನವೀನ್ ನಿವಾಸಕ್ಕೆ ಎಸ್ಆರ್ ಪಾಟೀಲ್ ಭೇಟಿ
ಹಾವೇರಿ: ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅವರು ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ತ್ವರಿತವಾಗಿ ಉಕ್ರೇನ್ನಲ್ಲಿರುವ ನವೀನ್ ಪಾರ್ಥಿವ ಶರೀರನ್ನು ಭಾರತಕ್ಕೆ ತರುವ ಕೆಲಸ ಮಾಡಬೇಕು. ಯುವಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಿ ಆತನ ಸಹೋದರನಿಗೆ ಯೋಗ್ಯ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಇದರ ಜೊತೆಗೆ ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಆದಷ್ಟು ಬೇಗ ಅವರನ್ನು ರಕ್ಷಿಸಬಬೇಕೆಂದು ಒತ್ತಾಯಿಸಿದರು.
Last Updated : Feb 3, 2023, 8:18 PM IST