ಕರ್ನಾಟಕ

karnataka

ETV Bharat / videos

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುತ್ತಿರುವ ಸಂಭ್ರಮದಲ್ಲಿ ಎಲಿಸ್ ಪೆರ್ರಿ: ವಿಡಿಯೋ - ವಿಶ್ವಕಪ್​ ಬಗ್ಗೆ ಎಲಿಸ್ ಪೆರ್ರಿ ಮಾತು

By

Published : Mar 25, 2021, 10:31 PM IST

ಕ್ರೈಸ್ಟ್​ಚರ್ಚ್​: ಆಸ್ಟ್ರೇಲಿಯಾದ ​ ಸ್ಟಾರ್​ ಕ್ರಿಕೆಟರ್​ ಎಲಿಸ್ ಪೆರ್ರಿ ಗಾಯದಿಂದ ಚೇತರಿಸಿಕೊಂಡಿದ್ದು, ಒಂದು ವರ್ಷದ ನಂತರ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅವರು 2019ರ ಮಹಿಳೆಯರ ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಮಧ್ಯೆ ಬಿಬಿಎಸ್​ ವೇಳೆ ತಂಡ ಸೇರಿಕೊಂಡಿದ್ದರಾದರೂ ಕೆಲವೇ ಪಂದ್ಯಗಳಲ್ಲಿ ಮತ್ತೆ ಗಾಯಗೊಂಡಿದ್ದರು. ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ​ಹ್ಯಾಮ್​ಸ್ಟ್ರಿಂಗ್ ನಿಂದ ಚೇತರಿಸಿಕೊಂಡಿದ್ದು, ತಾವೂ ಸಂಪೂರ್ಣ ಫಿಟ್​ನೆಸ್​ ಹೊಂದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮುಂಬರುವ ವಿಶ್ವಕಪ್​ ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details