ಡಾಕರ್ ರ‍್ಯಾಲಿ: 9 ನೇ ಹಂತದಲ್ಲಿ ಗೆಲುವು ಸಾಧಿಸಿ ಮುನ್ನಡೆ ಕಾಯ್ದುಕೊಂಡ ಪೀಟರ್‌ಹ್ಯಾನ್ಸೆಲ್.. ವಿಡಿಯೋ - ಡಾಕರ್ ರ‍್ಯಾಲಿ ಲೇಟೆಸ್ಟ್ ನ್ಯೂಸ್
ನಿಯೋಮ್: ಸೌದಿ ಅರೇಬಿಯಾದ ನಿಯೋಮ್‌ನಲ್ಲಿ ಮಂಗಳವಾರ ನಡೆದ ಡಾಕರ್ ರ‍್ಯಾಲಿಯ 9 ನೇ ಹಂತದಲ್ಲಿ ನಾಸರ್ ಅಲ್ - ಅಟಿಯಾಹ್ ಅವರನ್ನು ಹಿಂದಿಕ್ಕಿದ ಸ್ಟೀಫನ್ ಪೀಟರ್‌ಹ್ಯಾನ್ಸೆಲ್ ಗೆಲುವು ದಾಖಲಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೈಕ್ ರೇಸ್ನಲ್ಲಿ ರಿಕಿ ಬ್ರಾಬೆಕ್ ಅವರನ್ನು ಹಿಂದಿಕ್ಕಿ ಕೆವಿನ್ ಬೆನವಿಡೆಸ್ ಗೆಲುವು ಸಾಧಿಸಿದ್ದು, ಜೋಸ್ ಇಗ್ನಾಸಿಯೊ ಕಾರ್ನೆಜೊ ಫ್ಲೋರಿಮೊ ಮೂರನೇ ಸ್ಥಾನದಲ್ಲಿದ್ದಾರೆ.