ರಿಷಭ್ ಪಂತ್ ಸೇರಿ ನಾಳೆಯ ಪಂದ್ಯದ ಗೇಮ್ ಪ್ಲ್ಯಾನ್ ಬಗ್ಗೆ ಕೊಹ್ಲಿ ಮಾತು: ವಿಡಿಯೋ - ರಿಷಬ್ ಬಗ್ಗೆ ವಿರಾಟ್ ಮಾತು
ಚೆನ್ನೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ದೃಷ್ಠಿಯಲ್ಲಿಟ್ಟುಕೊಂಡು ಭಾರತ-ಇಂಗ್ಲೆಂಡ್ ನಾಳೆಯಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುತ್ತಿದ್ದು, ಉಭಯ ತಂಡಗಳಿಗೂ ಈ ಸರಣಿ ಮಹತ್ವದಾಗಿದೆ. ಅತಿ ಹೆಚ್ಚು ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ವಿಶ್ವ ಚಾಂಪಿಯನ್ ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ. ಇದೀಗ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಮುನ್ನಡೆಸಲಿದ್ದು, ಅನೇಕ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ರಿಷಭ್ ಪಂತ್ ನಾಳೆಯ ಟೆಸ್ಟ್ ಪಂದ್ಯದ ಭಾಗವಾಗಲಿದ್ದಾರೆ ಎಂದಿರುವ ಕೊಹ್ಲಿ, ಆಸ್ಟ್ರೇಲಿಯಾ ಟೂರ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಂತರ ರಿಷಭ್ ಅದ್ಭುತವಾದ ಪ್ರದರ್ಶನ ನೀಡ್ತಿದ್ದು, ತಂಡಕ್ಕೆ ಇದು ವರವಾಗಲಿದೆ ಎಂದಿದ್ದಾರೆ.