ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಕ್ವಾರಂಟೈನ್ ಸೆಂಟರ್ ಆಗಲಿದೆ ಈಡನ್ ಗಾರ್ಡನ್! - ಈಡನ್ ಗಾರ್ಡನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ಹೀಗಾಗಿ ಐತಿಹಾಸಿಕ ಈಡನ್ ಗಾರ್ಡನ್ ಗ್ಯಾಲರಿಯಲ್ಲಿ ಕ್ವಾರಂಟೈನ್ ಸೆಂಟರ್ ನಿರ್ಮಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಈಗಾಗಲೇ ಕ್ರಿಕೆಟ್ ಅಸೋಷಿಯೇಷನ್ ಬೆಂಗಾಲ್ಗೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಈಡನ್ ಗಾರ್ಡನ್ನ E, G ಹಾಗೂ F ಬ್ಲಾಕ್ಗಳಲ್ಲಿ ಕ್ವಾರಂಟೈನ್ ಸೆಂಟರ್ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ.