ಗಾಲ್ಫ್: ವರ್ಲ್ಡ್ ನಂ.1 ಆಟಗಾರ ಜಾನ್ಸನ್- ಟೈಗರ್ ವುಡ್ಸ್ಗೆ ಜಯ - undefined
ಅಮೆರಿಕದ ಆಸ್ಟಿನ್ನಲ್ಲಿ ಬಿಲಿಯನೇರ್ ಗೇಮ್ ಗಾಲ್ಫ್ ಆಟವನ್ನು ಡಬ್ಲ್ಯೂಜಿಸಿ-ಡೆಲ್ ಟೆಕ್ನಾಲಾಜಿಸ್ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ 64 ಆಟಗಾರರು ಭಾಗಿಯಾಗಿದ್ದಾರೆ. ಮೊದಲನೇ ದಿನದಲ್ಲಿ ಚೀಜ್ ರೀವೇ ವಿರುದ್ಧ ವರ್ಲ್ಡ್ ನಂ.1 ಆಟಗಾರ ಮತ್ತು 2017 ಗೆಲುವಿನ ಸರದಾರ ಡಸ್ಟಿನ್ ಜಾನ್ಸನ್ ಜಯ ಗಳಿಸಿದರು. ಆರೋನ್ ವೈಸ್ ವಿರುದ್ಧ ಟೈಗರ್ ವುಡ್ಸ್ ಗೆಲುವು ಸಾಧಿಸಿದರು. ಇನ್ನು ರೋರಿ ಮ್ಯಾಕ್ಲ್ರೊಯ್ ಅವರು ಲುಕೆ ಲಿಸ್ಟ್ ವಿರುದ್ಧ ಜಯಸಿದರು. ಸ್ಪೇನ್ ಆಟಗಾರ ಜಾನ್ ರಮ್ ಅವರು ಸಿ ವೂ ಕಿಮ್ ವಿರುದ್ಧ ಗೆದ್ದರು. ಶನಿವಾರ ನಾಕೌಟ್ ಸ್ಟೇಜ್ ಪಂದ್ಯ ನಡೆಯಲಿದ್ದು, ಸೆಮಿ ಫೈನಲ್ ಪಂದ್ಯಗಳು ಭಾನುವಾರ ಜರುಗಲಿವೆ.