ಓಪನ್ ಮಿಯಾಮಿ ಸೆಮಿ: ಎದುರಾಳಿಗೆ ಸಖತ್ ಟಕ್ಕರ್ ಕೊಟ್ಟು ಸೋತ ಕಿರಿಯ ಆಟಗಾರ! - undefined
34 ವರ್ಷಗಳ ಬಳಿಕ ಮಿಯಾಮಿ ಓಪನ್ ಟೆನ್ನಿಸ್ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದ ಅತೀ ಕಿರಿಯ ಆಟಗಾರ ಎಂಟ್ರಿ ಕೊಟ್ಟಿರುವ ಸಂಗತಿ ನಿಮಗೆ ತಿಳಿದಿದೆ. ಇಂದು ನಡೆದ ಮೊದಲನೇ ಸೆಮಿ ಫೈನಲ್ನಲ್ಲಿ ಜಾನ್ ಇಸ್ನರ್ಗೆ 18 ವರ್ಷದ ಕೆನಡಾ ಆಟಗಾರ ಫೆಲಿಕ್ಸ್ ಆಗರ್ ಅಲೈಸ್ಸೈಮ್ ಸಖತ್ ಟಕ್ಕರ್ ನೀಡಿದರು. 34 ವರ್ಷದ ಜಾನ್ ಇಸ್ನರ್ ಮೂರನೇ ಸುತ್ತಿನಲ್ಲಿ ಜಯ ಗಳಿಸಿದರು. ಇಸ್ನರ್ 7-6, 6-6, 7-4 ಮೂಲಕ ಫೆಲಿಕ್ಸ್ ವಿರುದ್ಧ ಗೆಲವು ದಾಖಲಿಸಿ ಫೈನಲ್ ತಲುಪಿದರು. ಫೈನಲ್ ಪಂದ್ಯ ಭಾನುವಾರದಂದು ನಡೆಯಲಿದ್ದು, ರೋಜರ್ ಫೆಡರರ್ ವಿರುದ್ಧ ಜಾನ್ ಇಸ್ನರ್ ಕಾದಾಟ ನಡೆಸಲಿದ್ದಾರೆ.
Last Updated : Mar 30, 2019, 1:46 PM IST