ವರ್ಲ್ಡ್ ಸರ್ಫ್ ಲೀಗ್: 17 ವರ್ಷದ ಬಾಲಕಿಗೆ ಒಲಿದ ಅದೃಷ್ಟ! - undefined
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ವರ್ಲ್ಡ್ ಸರ್ಫ್ ಲೀಗ್ನಲ್ಲಿ 17 ವರ್ಷದ ಬಾಲಕಿಗೆ ಜಯ ಸಿಕ್ಕಿದೆ. ದುರಾನ್ಬಾ ಬೀಚ್ನಲ್ಲಿ ನಡೆದ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಕ್ಯಾರಿಸ್ ಮೂರ್ರ ವಿರುದ್ಧ ಕ್ಯಾರೋಲಿನ್ ಮಾರ್ಕ್ಸ್ ಗೆಲುವು ಸಾಧಿಸಿದರು. ಇನ್ನು ಪುರಷರ ವಿಭಾಗದಲ್ಲಿ ಅಮೆರಿಕದ ಕೊಲೊಹೆ ಆಂಡಿನೋ ವಿರುದ್ಧ ಇಟಾಲೊ ಫೆರೈರಾಗೆ ಜಯ ಸಿಕ್ಕಿತು. ಎರಡರಿಂದ ನಾಲ್ಕು ಅಡಿಗಳ ಎತ್ತರದ ಸಮುದ್ರದ ಅಲೆಗಳಲ್ಲಿ ಈ ಸರ್ಫಿಂಗ್ ಸ್ಪರ್ಧೆ ನಡೆದಿತ್ತು.