ಹಾಫ್ ಸೆಂಚುರಿ ಖುಷಿಯಲ್ಲಿ ಮೈಸೂರು ಎಕ್ಸ್ಪ್ರೆಸ್ - ಜಾವಗಲ್ ಶ್ರೀನಾಥ್ಗೆ ಜನ್ಮದಿನ
ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ಗೆ ಇಂದು 50ನೇ ವರ್ಷದ ಜನ್ಮದಿನ. 1991ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು, ಭಾರತೀಯ ಕ್ರಿಕೆಟ್ಗೆ ನೀಡಿರುವ ಕೊಡುಗೆ ಅಪಾರ. ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದರು. ಅಲ್ಲದೆ, ಬ್ಯಾಟಿಂಗ್ನಲ್ಲೂ ಮಿಂಚಿ ಸೋಲಿನ ಅಂಚಿನಲ್ಲಿದ್ದ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತೊಂದು ಹೆಮ್ಮೆಯ ವಿಷಯ ಎಂದರೆ ಅವರು ಕನ್ನಡಿಗರು ಎಂಬುದು. ಅದೇ ಇರಲಿ ಶ್ರೀನಾಥ್ ಮತ್ತಷ್ಟು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳಬೇಕೆಂಬುದೇ ನಮ್ಮೆಲ್ಲರ ಆಶಯ.