ಮಿಯಾಮಿ ಓಪನ್ ಸೆಮಿ: 19ರ ಯುವಕನ ಮಣಿಸಿ ಫೆಡರರ್ ಫೈನಲ್‌ಗೆ - undefined
ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೆನ್ನಿಸ್ ಪಂದ್ಯಾವಳಿ ಅಂತಿಮ ಹಂತಕ್ಕೆ ತಲುಪಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 19 ವರ್ಷದ ಕಿರಿಯ ಆಟಗಾರ ಡೆನಿಸ್ ಶಪೊವೊಲೋವ್ ವಿರುದ್ಧ ರೋಜರ್ ಫೆಡರರ್ ಜಯ ಗಳಿಸಿ ಫೈನಲ್‌ಗೆ ತಲುಪಿದ್ದಾರೆ. ಡೆನಿಸ್ ವಿರುದ್ಧ ಫೆಡರರ್ 6-2, 6-4 ನೇರ ಸೆಟ್ಗಳಿಂದ ಗೆಲುವು ಸಾಧಿಸಿದರು. ಈ ವೇಳೆ ಫೆಡರರ್ ಕುಟುಂಬಸ್ಥರು ಮೈದಾದನಲ್ಲಿ ಸಂಭ್ರಮಿಸಿದರು. ಫೆಡರರ್ ನಾಲ್ಕನೇ ಮಿಯಾಮಿ ಚಾಂಪಿಯನ್ಶಿಪ್ ಆಗಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದ್ದು, ನಾಳೆ ಜಾನ್ ಇಸ್ನರ್ ವಿರುದ್ಧ ಫೈನಲ್ನಲ್ಲಿ ಕಾದಾಟ ನಡೆಸಲಿದ್ದಾರೆ.