ಎಕ್ಸ್ಕ್ಲೂಸಿವ್... ಉತ್ತಮ ಪ್ರದರ್ಶನ ತೋರುವುದಷ್ಟೇ ನನ್ನ ಕೆಲಸ, ಉಳಿದದ್ದು ಆಯ್ಕೆ ಸಮಿತಿಗೆ ಬಿಟ್ಟದ್ದು: ಸರ್ಫರಾಜ್ ಖಾನ್ - Sarfaraz Khan latest news
ಹೈದರಾಬಾದ್: ಐಪಿಎಲ್ಗೆ 17 ವರ್ಷಕ್ಕೆ ಪದಾರ್ಪಣೆ ಮಾಡುವ ಮೂಲಕ ಅತ್ಯಂತ ಕಿರಿಯ ಕ್ರಿಕೆಟರ್ ಎಂದು ದಾಖಲೆ ಹೊಂದಿರುವ ಮುಂಬೈ ತಂಡದ ಸರ್ಫರಾಜ್ ಖಾನ್ ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಲೀಗ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಲು ಸಿದ್ಧರಾಗಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ಸರ್ಫರಾಜ್ ಖಾನ್, ತಮಗೆ ತಮ್ಮ ತಂದೆ ಕೋಚ್ ಆಗಿದ್ದರಿಂದ ಬಹುಬೇಗನೆ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಭಾಗವಹಿಸಲು ಕಾರಣವಾಯಿತು ಎಂದಿದ್ದಾರೆ. ಜೊತೆಗೆ ಈ ಬಾರಿ ಐಪಿಎಲ್ನಲ್ಲಿ ಅಭಿಮಾನಿಗಳಿಲ್ಲದೆ ನಡೆದಿದ್ದು ವಿಭಿನ್ನವಾಗಿತ್ತು ಎಂದಿರುವ ಅವರು, ಐಪಿಎಲ್ ಮತ್ತು ಭವಿಷ್ಯದ ಬಗೆಗಿನ ಕೆಲವು ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.