Exclusive|ಜೀವ ಇರುವವರೆಗೂ ದ್ರಾವಿಡ್‌ರನ್ನ ಮರೆಯಲ್ಲ.. ಯುವ ವೇಗಿ ಇಶಾನ್ ಪೊರೆಲ್ - Prithvi Shaw
ಹೈದರಾಬಾದ್ : ರಾಹುಲ್ ದ್ರಾವಿಡ್ ನಮ್ಮ ತಂಡದ ಬೆನ್ನೆಲುಬಾಗಿದ್ದರು. ಅಂದು ಭಾರತದ ತಂಡಕ್ಕೆ ಗೋಡೆಯಂತೆ ವಿಶ್ವಕಪ್ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದರು. ಅವರಂತಹ ತರಬೇತುದಾರರನ್ನು ಎಂದಿಗೂ ನೋಡಿಲ್ಲ. ದಿನಕ್ಕೊಂದು ಹೊಸ ವಿಷಯಗಳನ್ನು ಕಲಿಯುತ್ತಿದ್ದೆ. ಅವರೊಂದಿಗೆ ತರಬೇತಿ ಪಡೆದ ನಾವೇ ಧನ್ಯರು. ಅವರೇ ನಮಗೆ ಸ್ಫೂರ್ತಿ.. ಎಂದಿಗೂ ನಾನು ಅವರನ್ನು ಮರೆಯುವುದಿಲ್ಲ ಎಂದು ಪೃಥ್ವಿ ಶಾ ನಾಯಕತ್ವದಲ್ಲಿ 2018ರ ಅಂಡರ್-19 ವಿಶ್ವಕಪ್ ಗೆದ್ದ ಭಾರತದ ತಂಡ ಸದಸ್ಯನಾಗಿದ್ದ ವೇಗಿ ಇಶಾನ್ ಪೊರೆಲ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದರು. ಚೆಂಡಿನ ಹೊಳಪಿಗೆ ಎಂಜಲು ಸವರುವುದು ನಿಷೇಧ ಸೇರಿ ಹಲವು ವಿಷಯಗಳನ್ನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ..