ಒಡಿಶಾದ ರೋರ್ಕೆಲಾದಲ್ಲಿ ಅತಿ ದೊಡ್ಡ ಹಾಕಿ ಸ್ಟೇಡಿಯಂ ನಿರ್ಮಾಣ: ನವೀನ್ ಪಟ್ನಾಯಕ್ ಘೋಷಣೆ - ಹಾಕಿ ಸ್ಟೇಡಿಯಂ ನಿರ್ಮಾಣದ ಘೋಷಣೆ ಮಾಡಿದ ನವೀನ್ ಪಟ್ನಾಯಕ್
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ಇಂದು ರೂರ್ಕೆಲಾ ನಗರದಲ್ಲಿ ವಿಶ್ವ ದರ್ಜೆಯ ಹಾಕಿ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಇಲ್ಲಿ 20,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಭಾರತದಲ್ಲೇ ಅತಿದೊಡ್ಡ ಹಾಕಿ ಕ್ರೀಡಾಂಗಣವಾಗಲಿದೆ. ಇತರ ಹಾಕಿ ಕ್ರೀಡಾಂಗಣಗಳಿಗಿಂತ ವಿಶೇಷವಾಗಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಈ ಕ್ರೀಡಾಂಗಣ 2023 ರಲ್ಲಿ ಪ್ರತಿಷ್ಠಿತ ಪುರುಷರ ಹಾಕಿ ವಿಶ್ವಕಪ್‌ಗೆ ಆತಿಥ್ಯವಹಿಸಲಿದೆ.