ಕರ್ನಾಟಕ

karnataka

ETV Bharat / videos

ವಿಶ್ವ ವಿಜೇತರಾಗಲು ಇನ್ನೊಂದೇ ಮೆಟ್ಟಿಲು... ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ ಅಭಿಮಾನಿಗಳು - semifinal

By

Published : Jul 8, 2019, 8:37 PM IST

ವಿಶ್ವಕಪ್​ ಮಹಾಟೂರ್ನಿ ಅಂತಿಮ ಹಂತ ತಲುಪಿದೆ. ಈಗಾಗಲೇ ಲೀಗ್​ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ನಾಲ್ಕು ಬಲಾಢ್ಯ ತಂಡಗಳು ಸೆಮಿಫೈನಲ್​ ಸೇರಿಕೊಂಡಿವೆ. ಸೆಮೀಸ್​ ಸೇರಿರುವ ತಂಡಗಳಲ್ಲಿ ಭಾರತವೇ ಬಲಿಷ್ಠವಾಗಿದ್ದು, ಮತ್ತೊಮ್ಮೆ ವಿಶ್ವ ಚಾಂಪಿಯನ್​ ಆಗುವ ಭರವಸೆ ಮೂಡಿಸಿದೆ. ಬಲಿಷ್ಠ ತಂಡವಾಗಿ ವಿಶ್ವಕಪ್​ ಟೂರ್ನಿ ಆರಂಭಿಸಿದ ಟೀಂ ​ಇಂಡಿಯಾ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ. ಲೀಗ್​ ಹಂತದಲ್ಲಿ ಎಲ್ಲಾ ತಂಡಗಳಿಗೂ ಸೋಲಿನ ರುಚಿ ತೋರಿಸಿದ ಬ್ಲೂ ಬಾಯ್ಸ್​.. ಅನಿರೀಕ್ಷಿತವಾಗಿ ಆಂಗ್ಲರ ವಿರುದ್ಧ ಸೋಲೊಪ್ಪಿಕೊಂಡಿದ್ರು. ಆದರೆ ಟೂರ್ನಿಯಲ್ಲಿ ಭಾರತ ತಂಡ ಇದುವರೆಗೂ ನೀಡಿರುವ ಪ್ರದರ್ಶನ ಅಭಿಮಾನಿಗಳಲ್ಲಿ ಹೊಸ ಆಸೆಯನ್ನ ಚಿಗುರಿಸಿದೆ.

ABOUT THE AUTHOR

...view details