ಸಕ್ಕರೆ ನಾಡಲ್ಲಿ 'ಯುವರತ್ನ': ಅಭಿಮಾನಿ ದೇವರ ಪ್ರೀತಿಗೆ ಅಪ್ಪು ಫಿದಾ, ಡಾಲಿ ಡೈಲಾಗ್ - ಯುವರತ್ನ ಕನ್ನಡ ಸಿನಿಮಾ
ಮಂಡ್ಯ: ರಾಜ್ಯಾಂದ್ಯಂತ ಸಂಚರಿಸುತ್ತಿರುವ 'ಯುವರತ್ನ' ತಂಡ ಮಂಡ್ಯಕ್ಕೆ ಆಗಮಿಸಿದೆ. ನಗರದ ಹೆಬ್ಬಾಗಿಲಲ್ಲೇ ಹೂಮಳೆ ಸುರಿಸುವ ಮೂಲಕ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. 'ಮಂಡ್ಯದ ಅಭಿಮಾನ ಬೆಲ್ಲದಂತೆ'. ಇಲ್ಲಿನ ಊಟ, ಅಭಿಮಾನಿಗಳ ಪ್ರೀತಿ ತುಂಬಾ ಇಷ್ಟ. ಕನ್ನಡ ಸಿನಿಮಾ, ಕಲಾವಿದರ ಮೇಲೆ ಮಂಡ್ಯ ಜನ ಅಪಾರ ಪ್ರೀತಿ ಇಟ್ಟಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ. ಸಿನಿಮಾಕ್ಕೆ ಬರುವಾಗ ಮಾಸ್ಕ್ ಧರಿಸಿ, ಕೊರೊನಾ ನಿಯಮ ಪಾಲಿಸಿ ಎಂದು ಅಭಿಮಾನಿಗಳಲ್ಲಿ ಪುನೀತ್ ಮನವಿ ಮಾಡಿದರು.