ಹಿರಿಯ ನಟ ಅನಂತ್ ನಾಗ್ ಹಾಗೂ ರಮೇಶ್ ಬಗ್ಗೆ ರಾಧಿಕಾ ಏನು ಹೇಳಿದ್ರು...? - ರಮೇಶ್ ಅರವಿಂದ್ ಬಗ್ಗೆ ರಾಧಿಕಾ ಮಾತು
'ರಂಗಿತರಂಗ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ರಾಧಿಕಾ ನಾರಾಯಣ್. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಮುಂದಿನ ನಿಲ್ದಾಣ , ಶಿವಾಜಿ ಸುರತ್ಕಲ್ ಸೇರಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಚೇತನ್, ರಾಧಿಕಾ ನಾರಾಯಣ್ ಆಗಿ ಹೆಸರು ಬದಲಿಸಿಕೊಂಡಿದ್ದಾರೆ. ಸದ್ಯ ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಜೊತೆ ತೆರೆ ಹಂಚಿಕೊಂಡಿರುವ ರಾಧಿಕಾ ನಾರಾಯಣ್, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಏಕೆ ಚೂಸಿ ಆದ್ರು..? ರಾಧಿಕಾ ಬ್ಯೂಟಿ ಸೀಕ್ರೆಟ್ ಏನು? ಎವರ್ ಗ್ರೀನ್ ನಟ ಅನಂತ್ನಾಗ್ ರಾಧಿಕಾಗೆ ಏನೆಂದು ಕರೆಯುತ್ತಾರೆ? ರಮೇಶ್ ಅರವಿಂದ್ ಅವರಿಂದ ರಾಧಿಕಾ ಕಲಿತದ್ದು ಏನು..? ರಾಧಿಕಾ ನಾರಾಯಣ್ಗೆ ಯಾವ ನಟಿಯ ಪಾತ್ರ ಮಾಡಬೇಕು ಎಂಬ ಆಸೆ ಇದೆಯಂತೆ..? ಈ ಎಲ್ಲಾ ವಿಷಯವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.