ನಟನೆ ಜೊತೆಗೆ ಆಹಾರ ಪ್ರಿಯರಿಗೆ ಸವಿರುಚಿ ಉಣಬಡಿಸಲಿರುವ ಅನಂತ್ ನಾಗ್..! - ಸವಿರುಚಿ
ಹಿರಿಯ ನಟ, ಎವರ್ ಗ್ರೀನ್ ಹೀರೋ ಅನಂತ್ ನಾಗ್ ನಿನ್ನೆ ತಮ್ಮ 71 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಮುಂದೆ ಅನಂತ್ ನಾಗ್ ನಟನೆ ಜೊತೆಗೆ ಆಹಾರ ಪ್ರಿಯರಿಗೆ ಸವಿರುಚಿಯನ್ನು ಉಣಬಡಿಸುತ್ತಿದ್ದಾರೆ. ನಿರ್ಮಾಪಕ ರಘುನಾಥ್ ಮಾಲೀಕತ್ವದ 'ಓಗರ' ಆಹಾರ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲು ಅನಂತ್ ನಾಗ್ ಒಪ್ಪಿಕೊಂಡಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನ ಎಸ್ಆರ್ವಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಘುನಾಥ್ ಕುಟುಂಬ ಅನಂತ್ ನಾಗ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಅನಂತ್ ನಾಗ್ ಪತ್ನಿ ಗಾಯತ್ರಿ ಕೂಡಾ ಹಾಜರಿದ್ದರು.